ರಾಷ್ಟೀಯ ಉದ್ಯಾನವನ ಬಂಡಿಪುರ. ಕರ್ನಾಟಕದಲ್ಲಿನ ಈ ರಾಷ್ಟೀಯ ಉದ್ಯಾನವನದಲ್ಲಿ ಕಾಡು ಪ್ರಾಣಿಗಳ ಮತ್ತು ಪಕ್ಷಿಗಳ ವೀಕ್ಷಣೆಗಾಗಿಯೇ ಬೇರೆ ಸ್ಥಳಗಳಿಂದ ಅಂದರೆ ಹೊರ ರಾಜ್ಯ ಹಾಗು ಹೊರ ದೇಶಗಳಿಂದಲೂ ಇಲ್ಲಿಗೆ ಬಂದು ವನ್ಯ ಮೃಗಗಳ ಚಟುವಟಿಕೆಯನ್ನು ಕಂಡು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಇನ್ನುಕೆಲವರು ಅವುಗಳ ಚಲನವನಲಗಳ ಅದ್ಯಯನ ಮಾಡಲು ಇಲ್ಲಿಗೆ ಬರುತ್ತಾರೆ. ಹೀಗೆ ದೇಶ-ವಿದೇಶದಿಂದ ಪ್ರವಾಸಿಗರು ನಮ್ಮ ರಾಜ್ಯದ ಹೆಸರಾಂತ ಬಂಡೀಪುರ ರಾಷ್ಟೀಯ ಉದ್ಯಾನವನಕ್ಕೆ ಬರುವುದ್ ನಮ್ಮ ಪಾಲಿಗೆ ಹೆಮ್ಮೆಯೇ ಸರಿ. ಮತ್ತು ಇದು ಕರ್ನಾಟಕ ಕೀರಿಟಕ್ಕೆ ಮತ್ತೊದು ಗರಿ ಇದ್ದಂತೆ.
ಇತ್ತೀಚಿಗೆ ಬಂಡೀಪುರಕ್ಕೆ ಬೇಟಿ ನೀಡಿದಾಗ ಕ್ಲಿಕ್ಕಿಸಿದ ಚಿತ್ರಗಳು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ...
ಓಡು ಮಗ ಓಡು....